ಇದೊಂದು ಮಹಿಳಾ ಆರ್ಥಿಕಸೇವಾ ಬ್ಯಾಂಕ್ ಆಗಿದ್ದು, ನವೆಂಬರ್ ೧೯, ೨೦೧೩ ರಂದು ಮಾಜಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರವರಿಂದ ಉದ್ಗಾಟನೆಗೊಂಡಿತು. ಈ ಬ್ಯಾಂಕಿಗೆ ಎಲ್ಲರೂ ಹಣವನ್ನು ಠೇವಣಿಮಾಡಬಹುದು, ಆದರೆ ಸಾಲವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ. ಈ ಬ್ಯಾಂಕು ೨೦೧೭ನೇ ಎಪ್ರಿಲ್ ೦೧ ರಂದು ಎಸ್ ಬಿ ಐ ನೊಂದಿಗೆ ಮೀಲಿನಗೊಂಡಿದೆ.ಇದು ಭಾರತದ ಮೊದಲ ಮಹಿಳಾ ಬ್ಯಾಂಕ್ ಆಗಿದೆ. == ಶಾಖೆಗಳು == ಈ ಬ್ಯಾಂಕು ೧೦೩ ಉಪಶಾಖೆಗಳನ್ನು ಹೊಂದಿದ್ದು, ೭೦೦ಕ್ಕೂ ಹೆಚ್ಚು ಶಾಖೆಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಇದರ ಮುಖ್ಯ ಕಛೇರಿ ಮುಂಬೈನಲ್ಲಿದೆ. ಪಾಟ್ನಾ, ಪೊನೆ, ಭುವನೇಶ್ವೇರ, ರಾಯಪುರ, ಕಾನ್ಪುರ, ಜೈಪುರ, ಆಗ್ರಾ, ಬೆಂಗಳೂರು, ಮಂಗಳೂರು, ಕೊಚ್ಚಿ, ಹೈದೆರಾಬಾದ್, ವಿಶಾಕಪಟ್ಟಣ, ಹಲವು ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. == ನಿರ್ವಹಣೆ == ಈ ಬ್ಯಾಂಕು ಭಾರತ ಸರ್ಕಾರಕ್ಕೆ ಸೇರಿದ್ದು, ೦೮ ಮಹಿಳಾ ಕಾರ್ಯನಿರ್ದೇಶಕರನ್ನು ಒಳಗೊಂಡಿದೆ. ಶ್ರೀ ಮತಿ ಉಷಾ ಅನಂತಸುಬ್ರಹ್ಮಣ್ಯನ್ ಅವರು ಇದರ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯಾಗಿದ್ದಾರೆ. == ಧ್ಯೇಯ == ಮಹಿಳೆಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದು, ಮಹಿಳಾ ಸಬಲೀಕರಣಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. == ಉಲ್ಲೇಖಗಳು ==